ನಾರಾಯಣ 1 -
	ವಿಷ್ಣುವಿನ ಮತ್ತೊಂದು ಹೆಸರು. ಓಂ ನಮೋ ನಾರಾಯಣಾಯ ಎನ್ನುವ ಅಷ್ಟಾಕ್ಷರಿ ಮಂತ್ರ ಶ್ರೀ ವೈಷ್ಣವರು ಅನುಸಂಧಾನ ಮಾಡುವ ಮಂತ್ರವಾಗಿದೆ. ಮಹಾಭಾರತದಲ್ಲಿ ನಾರಾಯಣೀಯವೆಂಬ ಒಂದು ಪರಿಚ್ಛೇದವಿದೆ. ಇದು ನಾರಾಯಣನ ಮಹಿಮೆಯನ್ನು ಕೊಂಡಾಡುತ್ತದೆ. ಅಷ್ಟಾಕ್ಷರಿ ಮಂತ್ರವನ್ನುನಾರಾಯಣ ನರನಿಗೆ ಉಪದೇಶ ಮಾಡಿದನೆಂದು ಪ್ರತೀತಿ.

	ನಾರಾಯಣನಿಗೆ ಮೀಸಲಾದ ಒಂದು ಉಪನಿಷತ್ತಿನ ಹೆಸರು ಮಹಾನಾರಾಯಣೋಪನಿಷತ್ತು. ಇದು ನಾರಾಯಣನ ಪಾರಮ್ಯವನ್ನು ಎತ್ತಿ ಹಿಡಿಯುತ್ತದೆ. ಈ ಉಪನಿಷತ್ತು ವೈಷ್ಣವ ಉಪನಿಷತ್ತುಗಳಲ್ಲಿ ಪ್ರಾಚೀನವಾದುವು. ರಾಮಾನುಜರು ತಮ್ಮ ಶ್ರೀಭಾಷ್ಯದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ತಮಿಳುನಾಡಿನ ವೈಷ್ಣವ ಸಂತರಾದ ಆಳ್ವಾರುಗಳು ನಾರಾಯಣ ಅನ್ನುವ ನಾಮವನ್ನು ಕೊಂಡಾಡಿದ್ದಾರೆ.
(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ